ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರು. ತತ್ವಶಾಸ್ತ್ರ-ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ನಿವೃತ್ತ ಪ್ರಾಧ್ಯಾಪಕರು. ಸಮಾಜದ ಸ್ಪಚ್ಛತೆಗಾಗಿ ಬರವಣಿಗೆ ಎಂಬ ನಿಲುವು ಅವರದು. == ಜೀವನ == ಚಂದ್ರಶೇಖರ ತಾಳ್ವರವರು 1949ನೆಯ ಇಸವಿ ಮೇ 18 ರಂದು ಜನಿಸಿದರು. ಇವರು ಎನ್‌ ಈಶ್ವರಪ್ಪ ಮತ್ತು ಗಂಗಮ್ಮನವರ ಮಗನಾಗಿ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೋಕಿನ ತಾಳ್ಯದಲ್ಲಿ ಜನಿಸಿದರು. ಇವರ ಸಾಕು ತಂದೆ ವಜ್ರಾಚಾರಿ ಮತ್ತು ಸಾಕು ತಾಯಿ ಸಿದ್ಧಮ್ಮರವರು. ಮಡದಿ ಜಿ. ಎಂ. ಶಶಿಕಲಾ ಹಾಗೂ ಮಕ್ಕಳು ಸಿ. ನನ್ನಯ್ಯ ಮತ್ತು ಪಾಂಚಾಲಿ ಸಿ ರವರನ್ನು ಹೊಂದಿರುವ ಸುಖಿ ಕುಟುಂಬ. ಪ್ರಾಥಮಿಕ ಶಿಕ್ಷಣವನ್ನು ತಾಳ್ಯದಲ್ಲಿ, ಪ್ರೌಡ ಶಿಕ್ಷಣವನ್ನು ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಶ್ರೀ ತರಳಬಾಳು ವಿದ್ಯಾಸಂಸ್ಥೆ ಸಿರಿಗೆರೆಯಲ್ಲ ಅಧ್ಯಯನ ಮಾಡಿ, ಉನ್ನತ ವ್ಯಾಸಂಗವನ್ನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ (ತತ್ವಶಾಸ್ತ್ರ) ಮತ್ತು ಎಂ.ಎ (ಕನ್ನಡ) ಅಧ್ಯಯನ ಮಾಡಿ, ತರ್ಕಶಾಸ್ತ್ರದ ಪ್ರಾಧ್ಯಪಕರಾಗಿ ಜಿ. ಚೆನ್ನಪ್ಪ ಪದವಿಪೂರ್ವ ಕಾಲೇಜು ಆನಗೋಡುನಲ್ಲಿ ತಮ್ಮ ಉಪನ್ಯಾಸ ವೃತ್ತಿಯನ್ನು ಪ್ರಾರಂಭಿಸಿ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜಿನಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಳಿನ ಏರಿಳಿತಗಳಿಗೆ ಕುಗ್ಗದೆ ಸಾಹಿತ್ಯ ಕ್ಷೇತ್ರದಲ್ಲಿ "ನನ್ನ ಕಣ್ಣಗಲಕ್ಕೆ" ಎಂಬ ಕವನ ಸಂಕಲನದಿಂದ ಮುನ್ನುಡಿ ಬರೆದು ಇಂದು ಕನ್ನಡ ಸಾಹಿತ್ಯವೆಂಬ ಹೆಮ್ಮರದ ಬೇರಾಗಿ ನಿಂತಿದ್ದಾರೆ. == ಸಾಹಿತ್ಯ == ಸಾಹಿತ್ಯ ರಚನೆ ಚಂದ್ರಶೇಖರ ತಾಳ್ಯರವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕಾವ್ಯಗಳನ್ನು ಬರೆಯುತ್ತಿದ್ದರು. ಬರೆವಣಿಗೆ ಸಾಗುತ್ತಾ ಕನ್ನಡ ಸಾಹಿತ್ಯದ ಮೇರು ಪರ್ವತವಾಗಿ ಬೆಳೆದರು. ಇವರ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕಾವ್ಯ, ಗದ್ಯ, ನಾಟಕಗಳು ಮತ್ತು ಅನುವಾದದಲ್ಲಿ ಹೆಸರುವಾಸಿಯಾಗಿದ್ದಾರೆ. === ಕಾವ್ಯ === ನನ್ನ ಕಣ್ಣಗಲಕ್ಕೆ ಸಿಂಧೂ ನದಿಯ ದಂಡೆಯ ಮೇಲೆ ಎಲ್ಲಿ ನವಿಲು ಹೇಳಿರೇ ಸುಡುವ ಭೂಮಿ ಕಾವಳದ ಸಂಜೆಯಲ್ಲಿ ಮೌನ ಮಾತಿನ ಸದ್ದು === ಗದ್ಯ === ಪ್ರಭು ಅಲ್ಲಮ ನೆಲವ ಹುಡುಕಿ ಕೆ. ಕೆಂಚಪ್ಪ (ವಿಧಾನಸೌಧ ಗ್ರಂಥಾಲಯದ ಪ್ರತಿಭಾವಂತ ಸಂಸದೀಯ ಪಟು ಮಾಲಿಕೆಯಲ್ಲಿ ಪ್ರಕಟಿತ) ಭಾರತೀಯ ತತ್ವಶಾಸ್ತ್ರದ ಪರಿಚಯ === ನಾಟಕ === ಅಲ್ಲಮ ಒಕ್ಕಲಿಗ ಮುದ್ದಣ್ಣ === ಅನುವಾದ === ರಾಮಕೃಷ್ಣ ಮತ್ತು ಅವರ ಕಾಲ ಗಾಂಧಿ ಹೋದರು: ನಮಗೆ ದಿಕ್ಕು ತೋರುವವರು ಯಾರು === ಸಂಪಾದಿತ === ಹೊಸ ದಿಕ್ಕಿನೆಡೆಗೆ (ಇತರರೊಂದಿಗೆ ಸಂಪಾದಿತ) === ಸಿಡಿ === ಹೂ ಗೊಂಚಲು === ಚಲನಚಿತ್ರ === ಪ್ರಶ್ನೆ: ಸಹ ಸಂಭಾಷಣೆ ದೇವನಹಳ್ಳಿ: ಗೀತರಚನೆ ಹೆಗ್ಗೋಡಿನಲ್ಲಿ 1981ರಲ್ಲಿ ನಡೆದ ಚಲನಚಿತ್ರ ರಸಗ್ರಹಣ ಶಿಬಿರದಲ್ಲಿ ಭಾಗಿ == ಪ್ರಶಸ್ತಿ, ಪುರಸ್ಕಾರ, ಬಿರುದು == === ಸಾಹಿತ್ಯಕ್ಕೆ ಸಂದ ಪ್ರಶಸ್ತಿಗಳು === ಆರ್ಯಭಟ ಪ್ರಶಸ್ತಿ ಶಿವಮೊಗ್ಗೆಯ ಕರ್ನಾಟಕ ಸಂಘ ಕೊಡುವ ಜಿ.ಎಸ್. ಎಸ್‌ ಕಾವ್ಯ ಪ್ರಶಸ್ತಿ ಡಾ. ನಲ್ಲೂರು ಪ್ರಸಾದ್‌ ಸಾಹಿತ್ಯ ಪ್ರಶಸ್ತಿ ಡಿ. ಎಸ್. ಮ್ಯಾಕ್ಸ್‌ ಸಾಹಿತ್ಯ ಶ್ರಿ ಪ್ರಶಸ್ತಿ === ಪುರಸ್ಕಾರ === ಎಸ್. ಚನ್ನಬಸವಯ್ಯ ಶ್ರೇಷ್ಠ ಉಪನ್ಯಾಸಕ ಪ್ರಶಸ್ತಿ === ಗೌರವ === 2002 ರಲ್ಲಿ ನಡೆದ ಹೊಳಲ್ಕೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ. == ಪೋಟೋ == == ಉಲ್ಲೇಖಗಳು ==